ಈ ಅದ್ಭುತ ಗೊಬ್ಬರ ಬಳಸಿ! ಹೆಚ್ಚಿನ ಇಳುವರಿ ಪಡೆದ ರೈತ ಮಹಿಳೆ!!!
ಕೃಷಿ ಕಾರ್ಮಿಕರು ಕೃಷಿಯೊಂದಿಗೆ ತಮ್ಮ ದಿನ ನಿತ್ಯದ ವೆಚ್ಚಕ್ಕಾಗಿ ಹೈನುಗಾರಿಕೆಯನ್ನು ನೆಚ್ಚಿಕೊಂಡಿರುತ್ತಾರೆ ಆದರೆ ನಾವು ಈಗ ತಿಳಿಸುತ್ತಿರುವುದು ಹೈನುಗಾರಿಕೆಯೊಂದಿಗೆ
ಕೃಷಿಯನ್ನು ಹಾಗೂ ಕೃಷಿಗಾಗಿ ಬಳಸುವ ಎರೆಹುಳು ಗೊಬ್ಬರವನ್ನು ತಯಾರಿಸುವ ಘಟಕದ ಬಗ್ಗೆ.
ಆದರೆ ವಿಶೇಷವೆಂದರೆ ಇದು ಸಾಮಾನ್ಯ ಎರೆಹುಳು ಗೊಬ್ಬರವಲ್ಲ ಇದು ಮೌಲ್ಯವರ್ದಿತ ಎರೆಹುಳು ಗೊಬ್ಬರ.
ಹೌದು ಈ ಘಟಕದಲ್ಲಿ 100 ಎಮ್ಮೆಗಳ ಹೈನುಗಾರಿಕೆಯನ್ನು ಮಾಡಲಾಗುತ್ತಿದ್ದು 120 ಬೆಡ್ ಗಳ ಮೂಲಕ ಮೌಲ್ಯವರ್ದಿತ ಎರೆಹುಳು ಗೊಬ್ಬರವನ್ನು ತಯಾರಿಸಲಾಗುತ್ತಿದೆ.
ಹೈನುಗಾರಿಕೆಯಿಂದ ಬರುವ ಸಗಣಿಯನ್ನು ತಮ್ಮ ಜಮೀನಿಗೆ ಬಳಸಿ ಇನ್ನು ಸಾಕಷ್ಟು ಸಗಣಿ ಉಳಿಯುತ್ತಿದ್ದರಿಂದ
ಈ ಜಮೀನಿನ ಒಡತಿ ಕೃಷಿ ವಿಜ್ಞಾನ ಕೇಂದ್ರದಲ್ಲಿನ ಕೃಷಿ ವಿಜ್ಞಾನಿಗಳನ್ನು ಸಂಪರ್ಕಿಸಿ ಅವರೊಂದಿಗೆ ಚರ್ಚಿಸಿ ಮೌಲ್ಯವರ್ದಿತ ಎರೆಹುಳು ಗೊಬ್ಬರವನ್ನು ತಯಾರಿಸಲು ಪ್ರಾರಂಭಿಸಿದರು.
ಮೊದಲಿಗೆ ಚಿಕ್ಕದಾಗಿ ವರ್ಮಿಸ್ ಬ್ಯಾಗ್ ನಲ್ಲಿ ಪ್ರಾರಂಭಿಸಿದ ಇವರ ಎರೆಹುಳು ಗೊಬ್ಬರ ಘಟಕವು ಇದೀಗ 120 ಬೆಡ್ ಗಳ ಮೌಲ್ಯವರ್ದಿತ ಎರೆಹುಳು ಗೊಬ್ಬರವನ್ನು ತಯಾರಿಸುವ ಘಟಕವಾಗಿದೆ.
ಈ ಅದ್ಭುತ ಗೊಬ್ಬರವನ್ನು ತಯಾರಿಸಿದ ವಿಧಾನ, ಇದರಲ್ಲಿರುವ ಪೋಷಕಾಂಶಗಳೇನು?
ಮೊದಲಿಗೆ ಸಾಮಾನ್ಯ ಎರೆಹುಳು ಗೊಬ್ಬರವನ್ನು ತಯಾರಿಸಿ 1 ಕ್ವಿಂಟಲ್ ಎರೆಹುಳು ಗೊಬ್ಬರಕ್ಕೆ 10 ಕೆಜಿ ಬೇವಿನ ಹಿಂಡಿ, ಒಂದು ಕೆಜಿ ರೈಜೊಬಿಎಂ, ಒಂದು ಕೆಜಿ ಪಿ ಎಸ್ ಬಿ, 1 ಕೆಜಿ ಅಜೊಸ್ಪರ್ಲಾಮಾ,
ಒಂದು ಕೆಜಿ ಸುಡೊಮೊನಾಸ್, ಒಂದು ಕೆಜಿ ಟ್ರೈಕೊಡ್ರಮಾ ಇದೆಲ್ಲವುಗಳನ್ನು ಮಿಶ್ರಣ ಮಾಡಿ ಮೌಲ್ಯವರ್ಧಿತ ಎರೆಹುಳು ಗೊಬ್ಬರವನ್ನು ತಯಾರಿಸಲಾಗುತ್ತಿದೆ.
ಇದರಿಂದ ಬೆಳೆಗಳಿಗೆ ಅವಶ್ಯಕತೆ ಇರುವ ಎಲ್ಲಾ ಪೋಷಕಾಂಶಗಳು ಸಿಗುವುದರಿಂದ ಉತ್ತಮ ಇಳುವರಿ ಬರುತ್ತದೆ ಹಾಗೂ ಇದು ಸಾವಯವ ಗೊಬ್ಬರದ ಎಲ್ಲಾ ದಿನಗಳನ್ನು ಹೊಂದಿದ್ದು ಇದರಿಂದ ಜಮೀನು ಫಲವತ್ತತೆಯಿಂದ ಕೂಡಿರುತ್ತದೆ.
ಇದು ಸಾಮಾನ್ಯ ಎರೆಹುಳು ಗೊಬ್ಬರಕ್ಕಿಂತ ಹೆಚ್ಚು ಪೋಷಕಾಂಶಗಳನ್ನು ಹೊಂದಿದ್ದು ವೈಜ್ಞಾನಿಕವಾಗಿ ಅತ್ಯುತ್ತಮ ಎರಹುಳು ಗೊಬ್ಬರವೆಂದು ಸಾಬೀತಾಗಿದೆ ಆದ್ದರಿಂದ ಇದರ ಬೆಲೆಯೂ ತುಸು ಹೆಚ್ಚಾಗುತ್ತದೆ.
ಹಾಗಾದರೆ ಇದರ ಬೆಲೆ ಎಷ್ಟು?
ಸಾಮಾನ್ಯ ಎರೆಹುಳು ಗೊಬ್ಬರಕ್ಕೆ ಎಂಟರಿಂದ ಹತ್ತು ರೂಪಾಯಿಗಳಾಗುತ್ತದೆ ಆದರೆ ಮೌಲ್ಯವರ್ದಿತ ಎರೆಹುಳು ಗೊಬ್ಬರದ ಬೆಲೆ ಒಂದು ಕೆಜಿಗೆ 15 ರೂಪಾಯಿಗಳು.
ಈ ಮೌಲ್ಯವಾದ್ಯುತ ಎರೆಹುಳು ಗೊಬ್ಬರದಲ್ಲಿ ಎರಡು ಬಗೆಯ ಎರೆಹುಳುಗಳನ್ನು ಬಳಸಲಾಗುತ್ತಿದ್ದು,
ಯುಟ್ರಿನಿಸಿಜಿನಿ ಹಾಗೂ ಅಸೋನಿಯಾ ಫುಟೇಡಾ ಎಂಬ ಎರಡು ತಳಿಗಳ ಎರೆಹುಳುಗಳನ್ನು ಬಳಸಲಾಗುತ್ತಿದೆ .
ಈ ಗೊಬ್ಬರವನ್ನು ಬೆಳೆಗಳ ಅವಶ್ಯಕತೆಗೆ ತಕ್ಕಂತೆ ಪೋಷಕಾಂಶಗಳನ್ನು ಬೆರೆಸಿಯು ಕೂಡ ಮಾಡಿಕೊಡಲಾಗುತ್ತದೆ.
ಈ ಕೆಳಕಂಡ ವಿಳಾಸದಲ್ಲಿ ಈ ಮೌಲ್ಯವರ್ದಿತ ಎರೆಹುಳು ಗೊಬ್ಬರ, ಸಾಮಾನ್ಯ ಎರೆಹುಳು ಗೊಬ್ಬರ, ಎರೆಹುಳುಗಳು ಸಹಿತ ಸಿಗುತ್ತವೆ.
ಇದರ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಅಥವಾ ಈ ಗೊಬ್ಬರ ಬೇಕಾದಲ್ಲಿ ಈ ಕೆಳಗಿನ ರೈತರನ್ನು ಸಂಪರ್ಕಿಸಬಹುದು.
ರೈತರ ವಿವರ :-
ಜ್ಯೋತಿ ಅವಿನಾಶ್ ಉಪ್ಲಾವ
ಸಯ್ಯದ್ ಚಿಂಕೊಳ್ಳಿ ಗ್ರಾಮ,
ತಾ.ಜಿ. ಕಲ್ಬುರ್ಗಿ
ಮೋ:9902857891, 7619141435, 9535618023
( ಸೂಚನೆ :- ರೈತರಲ್ಲಿ ವಿನಂತಿ ಅನಗತ್ಯವಾಗಿ ರೈತರಿಗೆ ಸಣ್ಣಪುಟ್ಟ ಮಾಹಿತಿಯನ್ನು ಕೇಳಲು ಫೋನ್ ಮಾಡಬೇಡಿ )
ಧನ್ಯವಾದಗಳು
*********ಅಂತ್ಯ************
< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >
1) ಫೇಸ್ಬುಕ್ / Facebook – ಜೈನ್ ಆಗಿ/ join facebook
2)ವಾಟ್ಸಾಪ್ ಗ್ರೂಪ್ /Whatsapp ಗುಂಪು – ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ
3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್
ಮಾರುಕಟ್ಟೆ ದರವನ್ನು ದಿನನಿತ್ಯ ತಿಳಿದುಕೊಳ್ಳಲು
ಕಬ್ಬರಿ ಮತ್ತು ತೆಂಗಿನಕಾಯಿ ಮಾರುಕಟ್ಟೆ : ಇಂದಿನ ಕಬ್ಬರಿ ಮತ್ತು ತೆಂಗಿನಕಾಯಿ ಮಾರುಕಟ್ಟೆ – ( ಕ್ಲಿಕ್ ಮಾಡಿ / ಇಲ್ಲಿ ಕ್ಲಿಕ್ ಮಾಡಿ)
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
ಪರಿಸರ ಪರಿಸರದೊಂದಿಗೆ ವಿಕೆ
ಆರ್ಥಿಕತೆ