ಅಡಿಕೆ ಬೆಳೆಯುವ ರೈತರಿಗೆ ದೊಡ್ಡ ತಲೆನೋವು ಎಂದರೆ ಇಂಗಾರ ಒಣಗುವುದು ಮತ್ತು ಇಂಗಾರ ಕೊಳೆರೋಗ ವೈಜ್ಞಾನಿಕವಾಗಿ ನಿಯಂತ್ರಿಸುವುದು ಹೇಗೆ???
ಅಡಿಕೆ ಗಿಡದಲ್ಲಿ ಇಂಗಾರ ಒಣಗುವ ಚಿನ್ಹೆಗೆ ಲಕ್ಷಣಗಳು ಹಾಗೂ ಹತೋಟಿ ಕ್ರಮಗಳ ಬಗ್ಗೆ ತಿಳಿದುಕೊಳ್ಳೋಣ
ಇಂಗಾರ ಒಣಗುವ ರೋಗ ಇತ್ತೀಚಿನ ದಿನಗಳಲ್ಲಿ ಅಡಿಕೆ ತೋಟಗಳಲ್ಲಿ ಬಹಳಷ್ಟು ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ ಏಕೆಂದರೆ ಬಹಳಷ್ಟು ರೈತರಿಗೆ ಇಂಗಾರ ಹೊರಟ ಸಂದರ್ಭದಲ್ಲಿ ಕಾಯಿ ಕಟ್ಟದೇ ಇರುವುದು ,
ಇಂಗಾರ ಸಂಪೂರ್ಣವಾಗಿ ಒಣಗಿ ಕಪ್ಪಾಗಿ ಮರದಲ್ಲಿ ಹಾಗೆ ಇರುವಂತದ್ದು ಇವೆಲ್ಲ ತೊಂದರೆಗಳನ್ನು ಬಹಳಷ್ಟು ರೈತರ ತೋಟಗಳಲ್ಲಿ ನೋಡಿದ್ದೇವೆ. ಯಾಕೆ ಹೀಗೆ ಆಗುತ್ತೆ ಅನ್ನುವುದನ್ನು ತಿಳಿದುಕೊಳ್ಳೋಣ.
ಇಂಗಾರು ರೋಗಕ್ಕೆ ಕಾರಣವಾದ ರೋಗಾನು ಕೊಲೆಟೋ ಟ್ರಿಕಿಯಂ ಗ್ಲೋಯಸ್ಪೊರಿಡಿಯಾಸ್ (colletotrichum gloeosporioides) ಇದರಿಂದ ರೋಗ ಅಡಿಕೆ ಮರಗಳಿಗೆ ಹರಡುತ್ತದೆ.
ಇದರ ಲಕ್ಷಣಗಳು:
ಸಂಪೂರ್ಣವಾಗಿ ಇಂಗಾರ ಒಣಗುತ್ತದೆ. ಅಥವಾ ಇಂಗಾರ ಅರ್ಧ ಒಣಗಿ ಅರ್ಧ ಕಾಯಿ ಕಟ್ಟುತ್ತದೆ ಅಥವಾ ಇಂಗಾರ ಬಾಯಿ ತೆರೆಯದೇ ಒಳಗೆ ಒಣಗಿ ಕೊಳೆತಿರುತ್ತದೆ.
ಈ ರೋಗ ಬಂದಲ್ಲಿ ಹುಳದ ಬಾಧೆಯು ಕಾಡುತ್ತದೆ. ಅದು ಬಲೆ ಹೆಣೆಯುವ ಹುಳು ಅಥವಾ ರಸ ಹೀರುವ ಕೀಟಗಳ ಗಾದೆಯು ಸಹ ಕಾಡುತ್ತದೆ ರಸ ಹೀರುವ
ಕೀಟಗಳು ಹರಡಿದಲ್ಲಿ ತಿಂಗಳುಗಳಿಂದ ಆಂಟು ವಸ್ತು ಹೊರಗೆ ಬಂದು ಸಂಪೂರ್ಣವಾಗಿ ಕಪ್ಪಾಗುತ್ತದೆ. ಹಾಗೂ ಅಂತ ಬರುವ ಮರಗಳಲ್ಲಿ ಕೆಂಚಗ ಹುಳುಗಳು ಹೆಚ್ಚಾಗಿರುತ್ತವೆ.
ನಿಯಂತ್ರಣ ಕ್ರಮಗಳು:
ವರ್ಷದ ಫಸಲಿನ ಕೊಯ್ಲು ಆದ ನಂತರ ತಕ್ಷಣವೇ ಆಯಾ ಅಡಿಕೆ ಮರಗಳಲ್ಲಿ ಒಣಗಿರುವ ಇಂಗಾರು ಮರಗಳು ಇದ್ದರೆ ಆ ಒಣಗಿರುವ ಇಂಗಾರುಗಳನ್ನು ಕಿತ್ತು ಹಾಕಿ ಸುಡಬೇಕು.
ಬಹಳಷ್ಟು ರೈತರು ಅಡಿಕೆ ಮುರಿದು ಉಳಿದ ಇಂಗಾರಗಳನ್ನ ಮರಗಳಿಗೆ ಗೊಬ್ಬರವಾಗಿ ಹಾಕುತ್ತಾರೆ. ಇದು ಸರಿಯಾದ ಕ್ರಮ ಅಲ್ಲ.
ಏಕೆಂದರೆ ಅದರಲ್ಲಿರುವ ಕೀಟಾಣುಗಳು ಮತ್ತೆ ಮರಗಳಲ್ಲಿ ಸೇರಿಕೊಂಡು ರೋಗ ಹರಡಲು ಕಾರಣವಾಗುತ್ತದೆ. ಒಣಗಿದ ಇಂಗಾರಗಳನ್ನು ಸುಡುವುದರಿಂದ 100 ರಲ್ಲಿ 80ರಷ್ಟು ಹಿಂಗಾರು ರೋಗವನ್ನು ತಡೆಗಟ್ಟಬಹುದಾಗಿದೆ.
ಸಿಂಪಡಣೆ ಮರಗಳು ತುಂಬಾ ಎತ್ತರವಾಗಿರುತ್ತವೆ ಎನ್ನುವ ಕಾರಣಕ್ಕೆ ರೈತರು ಮರಗಳ ತುದಿಗಳಿಗೆ ಔಷಧ ಸಿಂಪಡಣೆ ಮಾಡಲು ಹಿಂಜರಿದು ಬುಡಗಳಿಗೆ ಔಷಧಿ ಹೊಡೆಯುತ್ತಾರೆ.
ವ್ಯವಸ್ಥಿತವಾಗಿ ಆಧುನಿಕ ತಂತ್ರಜ್ಞಾನ ಬಳಸಿ ಪವರ್ ಸ್ಪ್ರೇ ಮುಖಾಂತರ ಮರದ ತುದಿಗಳಿಗೆ ಅಥವಾ ಇಂಗಾರಗಳಿಗೆ ರೋಗನಾಶಕ ಸಿಂಪಡಣೆ ಮಾಡುವುದು ಸೂಕ್ತವಾಗಿರುತ್ತದೆ.
ಸಿಂಪಡಣೆ ಮಾಡುವ ಸಮಯವೆಂದರೆ ಫೆಬ್ರವರಿ ತಿಂಗಳಲ್ಲಿ ಇಂಗಾರಗಳು ಹೊರಟಲ್ಲಿ ಆಗ ರೋಗನಾಶಕ ಸಿಂಪಡಿಸಬಹುದು.
ಇದಕ್ಕೆ ರೋಗನಾಶಕವಾಗಿ ಕಾರ್ಬನ್ ಡೈಸಿಮ್( corbon dysim) ಮತ್ತು ಮಂಕೋಜಬ್( mancojub) ಕಾಂಬಿನೇಷನ್ ಇರುವ ಔಷಧಿಯನ್ನು 2 ಗ್ರಾಂ ಪ್ರತಿ ಲೀಟರ್ ನೀರಿಗೆ ಬಳಸಿ ಸಿಂಪಡನೆ ಮಾಡಬಹುದು.
ಇದರ ಜೊತೆಗೆ ರಸ ಇರುವ ಕೀಟ ಬಾದೆ ಇದ್ದರೆ ಡಯೋಮೆಟ್ ಎಕ್ಸಾಮ್(thayomathaxon) ಎಂಬ ಔಷಧಿ 0.5 ಗ್ರಾಂ ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪಡಣೆ ಮಾಡಬಹುದು.
ಜೊತೆಗೆ ಇಂತಹ ಮರಗಳಲ್ಲಿ ಸಾಮಾನ್ಯವಾಗಿ ಹರಳು ಉದುರುವ ಸಮಸ್ಯೆ ಇರುತ್ತದೆ. ಇದಕ್ಕೆ ಲಘು ಪೋಷಕಾಂಶಗಳ ಮಿಶ್ರಣವನ್ನು ಐದು ಮಿಲಿ ಪ್ರತಿ ಲೀಟರ್ ನೀರಿಗೆ ಹೀಗೆ ಮೂರು ಔಷಧಿಗಳನ್ನು ಮಿಶ್ರಣ ಮಾಡಿ ಸಿಂಪಡಣೆ ಮಾಡಿದರೆ ಪರಿಹಾರ ಸಿಗುತ್ತದೆ.
ಸಿಂಪಡಣೆ ಮಾಡಿದ 35 ರಿಂದ 40 ದಿನಗಳ ನಂತರದಲ್ಲಿ ರೋಗವಾಸಿಯಾಗದೆ ಇದ್ದರೆ ಲಕ್ಷಣಗಳಿದ್ದರೆ
ಎರಡನೇ ಸಿಂಪಡಣೆಯಾಗಿ ಟ್ರಾಫಿಕ್ ಕೊನೋಜೆಲ್ ಒಂದು ಮಿಲಿ ಪ್ರತಿ ಲೀಟರ್ ನೀರಿಗೆ ಜೊತೆಗೆ ಅಂತರ್ ವ್ಯಾಪಿ ಕೀಟನಾಶಕ ವಿಪ್ರೋನಿಲ್ ( vipronil)ಎರಡು ಮಿಲಿ ಪ್ರತಿ ಲೀಟರ್ ನೀರಿಗೆ 0050 ಪೊಟ್ಯಾಷ್ 5 ಗ್ರಾಂ ಪ್ರತಿ ಲೀಟರ್ಗೆ ಬೆರೆಸಿ ಕೊಡಬಹುದು.
ಇದನ್ನು ರೈತರು ಪಾಲಿಸಿದರೆ ರೋಗವು ಕಡಿಮೆಯಾಗುತ್ತದೆ. ಇದನ್ನು ಸಾಮೂಹಿಕವಾಗಿ ಬಳಸುವುದರಿಂದ ತೋಟದಿಂದ
ತೋಟಕ್ಕೆ ರೋಗ ಹರಡುವುದಿಲ್ಲ ಇದರಿಂದ ಇಳುವರಿಯಲ್ಲಿ ಕುಂಠಿತವಾಗುವುದಿಲ್ಲ. ಪ್ರತಿ ರೈತರ ಇದರ ಬಗ್ಗೆ ಜಾಗೃತೆಯಿಂದ ಹಾಗು ವಿವೇಚನೆಯಿಂದ ಬೆಳೆ ಬೆಳೆದು ಒಳ್ಳೆಯ ಫಸಲನ್ನು ಪಡೆಯಬಹುದು.
<<< ಅಡಿಕೆ ಮಾರುಕಟ್ಟೆ : ಇಂದಿನ ಅಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ತೆಂಗಿನ ಮಾರುಕಟ್ಟೆ : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
< ದಿನನಿತ್ಯ ಅಡಿಕೆ ಮಾರುಕಟ್ಟೆಯ ದರವನ್ನು, ಅಡಿಕೆ ರೋಗ , ಅಡಿಕೆಗೆ ಗೊಬ್ಬರ ಸಿಂಪರಣೆ, ಅಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >
1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು. ಹೊಸ ಅಡಿಕೆ, ಹಳೆಯ ಅಡಿಕೆ ರಾಶಿ ಇಪ್ಪಿ ಬೆಟ್ಟಿ ಕೆಂಪುಗೋಟು ಚಿಪ್ಪು, ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ. ರೈತರಿಗೆ ಯಾವ ಅಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅಡಿಕೆ ದರವನ್ನು ತಿಳಿಸಲಾಗಿದೆ.
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
– ವಿಕೆ
ಪರಿಸರ ಪರಿಸರದೊಂದಿಗೆ ಆರ್ಥಿ0ಕತೆ