90% Sprinkler Subsidy:: 90 ಪರ್ಸೆಂಟ್ ಸಬ್ಸಿಡಿ ದರದಲ್ಲಿ ಸ್ಪ್ರಿಂಕ್ಲರ್ ಮತ್ತೆ ಪೈಪುಗಳು!! ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್!!
ನೀರಾವರಿ ಕ್ರಾಂತಿಗೆ ಬಂತು 90% ಸಬ್ಸಿಡಿ ಸ್ಪ್ರಿಂಕ್ಲರ್ ಪೈಪ್ ಪಡೆಯಲು ಈಗಲೇ ಅರ್ಜಿ ಹಾಕಿ ::
90% subsidy for irrigation revolution ,Apply now for sprinkler pipes ::
ಕರ್ನಾಟಕ ಸರ್ಕಾರವು ಕೃಷಿ ಇಲಾಖೆಯ ಮುಖಾಂತರ ಸಹಾಯಧನದ ದರದಲ್ಲಿ ಸ್ಪ್ರಿಂಕ್ಲರ್ ಪೈಪ್ಗಳನ್ನು (ತುಂತುರು ನೀರಾವರಿ ಪದ್ಧತಿ) ಪಡೆಯಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ
• ಈ ವರ್ಷದಿಂದ ಎಲ್ಲಾ ವರ್ಗದ ರೈತ ಸಮುದಾಯಕ್ಕೂ ಶೇಕಡಾ 90% ರಷ್ಟು ಸಹಾಯಧನವನ್ನು (Subsidy) ಒದಗಿಸಲಾಗುವುದು.
* ಕಳೆದ 7 ವರ್ಷಗಳಲ್ಲಿ ಯಾರು ಸ್ಪ್ರಿಂಕ್ಲರ್ ಪೈಪ್ಗಳನ್ನು ಪಡೆದಿರುವುದಿಲ್ಲವೋ, ಅಂತಹ ರೈತರು ಮಾತ್ರ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಅರ್ಹರಾಗಿರುತ್ತಾರೆ. ಒಂದು ವೇಳೆ ಈ ಹಿಂದೆ ಪಡೆದಿದ್ದಲ್ಲಿ, 7 ವರ್ಷಗಳ ಅವಧಿ ಮುಗಿದ ನಂತರ ಪುನಃ ಅರ್ಜಿಯನ್ನು ಸಲ್ಲಿಸುವ ಅವಕಾಶವಿರುತ್ತದೆ.
• ಯೋಜನೆಯಡಿಯಲ್ಲಿ ಒಟ್ಟು 30 ಸ್ಪ್ರಿಂಕ್ಲರ್ ಪೈಪ್ಗಳು ಲಭ್ಯವಿದ್ದು ( 3 different sizes),ಅದರೊಂದಿಗೆ ನಾಜಲ್ (nozzle), ರೈಸರ್ ಪೈಪ್ (riser pipe), ಎಲ್ಬೋ (elbow), ಟೀ (tee) ಮುಂತಾದ ಅಗತ್ಯ ಫಿಟ್ಟಿಂಗ್ ಉಪಕರಣಗಳು ಲಭ್ಯವಿರುತ್ತವೆ.
* ರೈತರ ವಂತಿಕೆ (Farmer Share) ಪೈಪ್ಗಳ ದರವು ಕಂಪನಿ ಮತ್ತು ಪೈಪ್ನ ಅಳತೆಯನ್ನು ಅವಲಂಬಿಸಿ ಬದಲಾಗಬಹುದು. ಉದಾಹರಣೆಗೆ, 63mm ಅಳತೆಯ ಪೈಪ್ಗೆ ಅಂದಾಜು ₹2,666 ಗಳಷ್ಟು ಹಣವನ್ನು ಪಾವತಿಸಬೇಕಾಗಬಹುದು.
ಅಗತ್ಯವಿರುವ ದಾಖಲೆಗಳು:
Documents required :
1. ಆಧಾರ್ ಕಾರ್ಡ್ (Aadhaar Card)
2. ಆರ್.ಟಿ.ಸಿ (ಪಹಣಿ)
3. ಬ್ಯಾಂಕ್ ಪಾಸ್ ಬುಕ್ (Bank Pass Book)
4. ಬೆಳೆ ದೃಢೀಕರಣ ಪತ್ರ ಮತ್ತು ನೀರಾವರಿ ಮೂಲದ ಪತ್ರ
5. ಜಾತಿ ಪ್ರಮಾಣ ಪತ್ರ (SC/ST ರೈತರಿಗೆ ಮಾತ್ರ ಅನ್ವಯಿಸುತ್ತದೆ)
6. ಪಾಸ್ಪೋರ್ಟ್ ಸೈಜ್ ಫೋಟೋ (Passport size photo)
7. ₹100 ಮುಖಬೆಲೆಯ ಬಾಂಡ್ ಪೇಪರ್
8. ತೋಟಗಾರಿಕೆ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ (NOC – ಅಗತ್ಯವಿದ್ದಲ್ಲಿ)
9. FID ನಂಬರ್ (ಫಾರ್ಮರ್ ಐಡಿ – Farmer ID) , ಇದು ಕಡ್ಡಾಯವಾಗಿ ಬೇಕಾಗುವ ದಾಖಲೆಯಾಗಿದ್ದು, ಒಂದು ವೇಳೆ ಇಲ್ಲದಿದ್ದಲ್ಲಿ ಹತ್ತಿರದ ರೈತ ಸಂಪರ್ಕ ಕೇಂದ್ರದಲ್ಲಿ (RSK) ಮಾಡಿಸಿಕೊಳ್ಳಬಹುದು.
ಅರ್ಜಿ ಸಲ್ಲಿಸುವ ವಿಧಾನ:-
Application process:-
* ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ (RSK) ಭೇಟಿ ನೀಡಿ, ಅಗತ್ಯವಿರುವ ಎಲ್ಲಾ ದಾಖಲೆಗಳೊಂದಿಗೆ ಅರ್ಜಿಯನ್ನು ಆಫ್ಲೈನ್ನಲ್ಲಿ ಸಲ್ಲಿಸಬಹುದು.
• ಸರ್ಕಾರದ ಅಧಿಕೃತ ಪೋರ್ಟಲ್ ಮುಖಾಂತರ FID ಬಳಸಿ ಲಾಗಿನ್ ಆಗಿ, OTP ಯನ್ನು ನಮೂದಿಸಿ ದೃಢೀಕರಿಸಿದ ನಂತರ, ಜಮೀನಿನ ವಿವರಗಳನ್ನು ನಮೂದಿಸಿ, ಬೇಕಾಗಿರುವ ಪೈಪ್ನ ಅಳತೆ (63mm, 75mm ಅಥವಾ 90mm) ಹಾಗೂ ಕಂಪನಿಯನ್ನು ಆಯ್ಕೆ ಮಾಡಿ ಆನ್ಲೈನ್ ಅರ್ಜಿಯನ್ನು ಸಲ್ಲಿಸಬಹುದು.
Step 1 :: ಆನ್ಲೈನ್ ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಮೇಲೆ ಪ್ರೆಸ್ ಮಾಡಿ https://kkisan.karnataka.gov.in/Citizen/ApplicationEntryMI.aspx

Application Page
Application front page
ಗಮನಕ್ಕೆ, ಅರ್ಜಿಯನ್ನು ಸಲ್ಲಿಸಿದ ನಂತರ ದೊರೆಯುವ ಸ್ವೀಕೃತಿ ಪ್ರತಿಯನ್ನು ಕಡ್ಡಾಯವಾಗಿ ರೈತ ಸಂಪರ್ಕ ಕೇಂದ್ರಕ್ಕೆ ಸಲ್ಲಿಸಬೇಕು. ಯಾರು ಮೊದಲು ಅರ್ಜಿಯನ್ನು ಸಲ್ಲಿಸುತ್ತಾರೋ ಅವರಿಗೆ ಆದ್ಯತೆಯ ಮೇರೆಗೆ ಪೈಪ್ಗಳನ್ನು ವಿತರಿಸಲಾಗುವುದು.
ಈ ರೀತಿ ಮಾಡುವುದರಿಂದ ಕಡಿಮೆ ನೀರನ್ನು ಬಳಸಿ ಹೆಚ್ಚು ಜಾಗಕ್ಕೆ ನೀರು ಕೊಡಬಹುದು. ಇದರಿಂದ ನೆಲದಡಿಯ ನೀರನ್ನು ಉಳಿಸಬಹುದು ಮತ್ತು ನೀರು ವ್ಯರ್ಥವಾಗುವುದನ್ನು ತಪ್ಪಿಸಬಹುದು.
ಮಣ್ಣು ಕೊಚ್ಚಿ ಹೋಗುವುದನ್ನು ತಡೆದು, ಭೂಮಿಯಲ್ಲಿ ತೇವಾಂಶವನ್ನು ಸರಿಯಾಗಿ ಇಟ್ಟುಕೊಳ್ಳುವುದರಿಂದ ಬೆಳೆಗಳು ಚೆನ್ನಾಗಿ ಬೆಳೆಯುತ್ತವೆ. ಜೊತೆಗೆ, ಕೆಲಸ ಮಾಡುವವರ ಅವಶ್ಯಕತೆ ಕಡಿಮೆ ಆಗುವುದರಿಂದ ಸಂಬಳದ ಖರ್ಚು ಉಳಿತಾಯವಾಗುತ್ತದೆ.
ಸಹಾಯಧನ ಇರುವುದರಿಂದ ಬಡ ರೈತರಿಗೂ ಇದು ಕಡಿಮೆ ಬೆಲೆಯಲ್ಲಿ ಸಿಗುತ್ತದೆ. ಇದರಿಂದ ಕೃಷಿಯ ಖರ್ಚು ಕಡಿಮೆಯಾಗಿ ರೈತರಿಗೆ ಹೆಚ್ಚು ಲಾಭ ಸಿಗುತ್ತದೆ.
Farmers who use this technique can water more land with less water. This helps in protecting underground water sources and avoiding water loss. By stopping soil from washing away and keeping the right amount of moisture in the soil, it leads to healthier plants.
Also, it cuts down on the need for workers, which lowers labor expenses. Because there is financial assistance offered, even farmers with small farms can buy it at a reduced cost.
In the end, this lowers the total cost of farming and results in increased earnings for the farmers.
Thank you.
ಧನ್ಯವಾದಗಳು
<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅ ಡಿಕೆ ರೋಗ , ಅ ಡಿಕೆಗೆ ಗೊಬ್ಬರ ಸಿಂಪರಣೆ, ಅ ಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >
1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು. ಹೊಸ ಅ ಡಿಕೆ, ಹಳೆಯ ಅ ಡಿಕೆ ರಾಶಿ ಇಪ್ಪಿ ಬೆಟ್ಟಿ ಕೆಂಪುಗೋಟು ಚಿಪ್ಪು,
ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ. ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ.
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
– V K
ಪರಿಸರ ಪರಿಸದೊಂದಿಗೆ ಆರ್ಥಿಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.

Leave a Reply