"Agriculture is our CULTURE"

Crop Insurance:: ಬೆಳೆ ಹಾನಿ ಪರಿಹಾರಕ್ಕೆ ಯಾರು ಅಹ೯ರು? ಇವರಿಗೆ ಮಾತ್ರ ಸಿಗುತ್ತೆ ಪರಿಹಾರ ಹಣ! 90% ರೈತರಿಗೆ ಸಿಗಲ್ಲ ಬೆಳೆ ಹಾನಿ ಪರಿಹಾರ!

ಸಾಮಾನ್ಯವಾಗಿ ರೈತರಿಗೆ ನೆರಹಾವಳಿ ಹಾಗೂ ಬರಗಾಲ ಮುಂತಾದ ನೈಸರ್ಗಿಕ ವಿಕೋಪಗಳಾದಾಗ ಸಕಾ೯ರದ ಕಡೆಯಿಂದ ಬೆಳೆ ಹಾನಿ ಪರಿಹಾರ ಮೊತಿತ ಸಿಗುತ್ತದೆ.

ಆದರೆ ಇದು ಬೆಳೆ ಹಾನಿಗೊಳಗಾದ ಎಲ್ಲ ರೈತರಿಗೂ ಸಿಗುತ್ತದೆಯೇ ಎಂಬುದು ಗಮನಿಸಬೇಕಾದ ವಿಷಯ. ಸಕಾ೯ರದಿಂದ ಸಿಗುವ ಬೆಳೆ ಹಾನಿ ಪರಿಹಾರ ಮೊತ್ತ ಎಲ್ಲ ರೈತರಿಗೂ ಸಿಗಲ್ಲ.

ಬದಲಾಗಿ ಸಕಾ೯ರ ಬೆಳೆಗಳಿಗಾಗಿ ಫಸಲ್ ಬಿಮಾ ಯೋಜನೆಗಳಂತಹ ವಿಮಾ ಯೋಜನೆಗಳನ್ನು ಜಾರಿಗೆ ತಂದಿದ್ದು, ಈ ಯೋಜನೆಗಳಲ್ಲಿ ನೊಂದಾಯಿಸಿ ವಿಮೆ ಪಾವತಿ ಮಾಡುವ ರೈತರಿಗೆ ಮಾತ್ರ ಬೆಳೆ ಹಾನಿ ಪರಿಹಾರ ಮೊತ್ತ ಸಿಗುತ್ತಿದೆ.

#ಬೆಳೆ ಹಾನಿ#ಹಣ

90% ರೈತರಿಗೆ ಪರಿಹಾರ ಮೊತ್ತ ಸಿಗಲ್ಲ!

ರಾಜ್ಯದಲ್ಲಿ ಶೇ 10 ರಷ್ಟು ರೈತರು ಮಾತ್ರ ತಮ್ಮ ಬೆಳೆಗಳಿಗೆ ವಿಮೆ ಮಾಡಿಸಿ ಪರಿಹಾರ ಮೊತ್ತ ಪಡೆಯುತ್ತಿದ್ದಾರೆ. ಇನ್ನುಳಿದ 90% ರೈತರು ಯಾವುದೇ ವಿಮೆ ಮಾಡಿಸುತ್ತಿಲ್ಲ. ಹೀಗಾಗಿ ಅವರಿಗೆ ಬೆಳೆ ಹಾನಿಯಾದರೂ ಕೂಡ ಯಾವುದೇ ಪರಿಹಾರ ಮೊತ್ತ ಸಿಗುತ್ತಿಲ್ಲ.

ಬೆಳೆ ಹಾನಿ ಪ್ರಮಾಣಕ್ಕನುಗುಣವಾಗಿ ಪರಿಹಾರ!

ಬೆಳೆ ವಿಮೆಗಳಲ್ಲಿ ಕಟ್ಟುನಿಟ್ಟಾದ ನಿಯಮಗಳಿದ್ದು, ಸಕಾ೯ರದಿಂದ ಬೆಳೆ ಹಾನಿಗೊಳಗಾದ ಪ್ರಮಾಣದ ಮೇಲೆ ಪರಿಹಾರ ಮೊತ್ತವನ್ನು ವಿಮಾ ಕಂಪನಿಗಳ ಮೂಲಕ ಸಕಾ೯ರ ನೀಡುತ್ತಿದೆ.

50% ಹಾನಿಯಾಗಿದ್ದಲ್ಲಿ 50% ಪರಿಹಾರ ಮೊತ್ತ ಸಿಗುತ್ತಿದೆ. ಸಂಪೂರ್ಣ ಹಾನಿಯಾಗಿದ್ದಲ್ಲಿ ಕನಿಷ್ಟ 80% ಆದರೂ ಪರಿಹಾರ ಮೊತ್ತ ಕೊಡಬೇಕು ಎಂದು ಸಕಾ೯ರ ಸೂಚನೆ ನೀಡಿದೆ.

ವಿಮೆ ಮಾಡಿಸದೇ ಇರುವ ರೈತರಿಗೂ ಸಹಕಾರಿಯಾಗುವಂತೆ ಸಕಾ೯ರ ಯಾವುದಾದರೂ ಯೋಜನೆ ಜಾರಿಗೆ ತರಬೇಕು. ಇಲ್ಲವಾದಲ್ಲಿ ರೈತರು ಕೃಷಿಯಲ್ಲಿ ಆಥಿ೯ಕವಾಗಿ ನೆಲಕ್ಕಚ್ಚುತ್ತಾರೆ.

ಸಕಾ೯ರದಿಂದ ಬೆಳೆ ಹಾನಿ ಪರಿಹಾರ ಪಡೆದಿರುವ ಹಾಗೂ ಪಡೆಯಲು ಅಹ೯ರಾಗಿರುವ ರೈತರ ಲಿಸ್ಟ್ ನ್ನು ಸಕಾ೯ರ ಬಿಡುಗಡೆ ಮಾಡಿದ್ದು, ನಿಮ್ಮ ಊರಿನಲ್ಲಿ ಯಾರೆಲ್ಲಾ ಪರಿಹಾರ ಪಡೆಯಲು ಅಹ೯ರು ಎಂಬ ಬಗ್ಗೆ ಚೆಕ್ ಮಾಡಬಹುದು

#ಬೆಳೆ ಹಾನಿ#ಹಣ

ಪರಿಹಾರ ಪಡೆದಿರುವ ರೈತರ ಲಿಸ್ಟ್ ಚೆಕ್ ಮಾಡುವುದು ಹೇಗೆ?

ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿಲ್ಲದಿದ್ದರೆ ಬರಪರಿಹಾರ ಹಣ ಬರಲ್ಲ!

Step 1: ಅದಕ್ಕಾಗಿ ನೀವು ಮೊದಲಿಗೆ ಈ ಕೆಳಗಿನ ಲಿಂಕ್(link) ಮೇಲೆ ಕ್ಲಿಕ್ ಮಾಡಿ https://parihara.karnataka.gov.in /service89/PaymentDetails Report.aspx

Step 2: ನಂತರ ಅಲ್ಲಿ ಕೇಳಲಾದ ವರ್ಷ, ಋತು, ಕ್ಯಾಲಾಮಿಟಿ ವಿಧ(calamity type) (ಉದಾಹರಣೆಗೆ – ಪೂವ೯ ಮುಂಗಾರು) , ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ ಎಲ್ಲವನ್ನು ಹಾಕಿ

PIC 1: Enter the required details

Step 3: ನಂತರ ಗೆಟ್ ರಿಪೋಟ್೯ (Get report) ಮೇಲೆ ಕ್ಲಿಕ್ ಮಾಡಿ ಆಗ ನಿಮಗೆ ಬೆಳೆ ಹಾನಿ ಪರಿಹಾರ ಪಡೆದುಕೊಂಡ ನಿಮ್ಮ ಊರಿನ ರೈತರ ಲಿಸ್ಟ್ ಸಿಗುತ್ತದೆ. ಅದರಲ್ಲಿ ನಿಮ್ಮ ಹೆಸರು ಇದೆಯೇ ಚೆಕ್ ಮಾಡಿಕೊಳ್ಳಿ

PIC 2: List of farmers details

ಇದರಲ್ಲಿ ಕಳೆದ ವಷ೯ದ ಬರಪರಿಹಾರ ಪಡೆದಿರುವ ಲಿಸ್ಟ್ ಕೂಡ ಚೆಕ್ ಮಾಡಬಹುದು.

ಬೆಳೆ ಪರಿಹಾರ ಮೊತ್ತ ಜಮೆಯಾಗಿರುವ ವಿವರವಾದ ಸ್ಟೇಟಸ್ ಚೆಕ್ ಮಾಡುವುದು ಹೇಗೆ?

Step 1: ನೀವು ಮೊದಲಿಗೆ ಸಂರಕ್ಷಣೆ ಎಂಬ ವೆಬ್ಸೈಟಿಗೆ ಭೇಟಿ ನೀಡಬೇಕು ಅದಕ್ಕಾಗಿ ಈ ಕೆಳಗಿನ ಲಿಂಕ್(link) ಮೇಲೆ ಕ್ಲಿಕ್ ಮಾಡಿ

https://www.samrakshane.karnataka.gov.in/

Step 2: ನಂತರ ಅಲ್ಲಿ ವರ್ಷ ಹಾಗೂ ಋತು ಸೆಲೆಕ್ಟ್ ಮಾಡಿ ಗೋ(Go) ಬಟನ್ ಕ್ಲಿಕ್ ಮಾಡಿ

Pic 3: click on Go button

Step 3: ನಂತರ ಓಪನ್ ಆಗುವ ಪೇಜ್ ನಲ್ಲಿ ಚಿತ್ರದಲ್ಲಿ ತೋರಿಸಿರುವಂತೆ ಫಾಮ೯ರ್ಸ್ ಆಯ್ಕೆಯಲ್ಲಿರುವ ಚೆಕ್ ಸ್ಟೇಟಸ್ (check status) ಎಂಬ ಆಪ್ಷನ್ ಇದ್ದು, ಅದರ ಮೇಲೆ ಕ್ಲಿಕ್ ಮಾಡಿ 2

Pic 4: Click on Check status

Step 4: ನಂತರ ಓಪನ್ ಆಗೋ ಪೇಜ್ ನಲ್ಲಿ ನಿಮ್ಮ ವಿಮೆ ಪಾವತಿಸಿದ ಅರ್ಜಿಯ ಸಂಖ್ಯೆ ಇದ್ದರೆ ಅದನ್ನು ಅಥವಾ ನಿಮ್ಮ ಆಧಾರ್ ಕಾರ್ಡ್ ನಂಬರ್ ಅಥವಾ ಮೊಬೈಲ್ ನಂಬ‌ರ್ ಹಾಕಿ ಹಾಗೂ ಕೊಟ್ಟಿರುವ ಕ್ಯಾಪ್ಟಾ ಎಂಟರ್ ಮಾಡಿ ಸರ್ಚ್(Search) ಬಟನ್ ಮೇಲೆ ಕ್ಲಿಕ್ ಮಾಡಿ

Pic 5: Enter Aadhar/mobile no

Step 5: ಆಗ ನಿಮಗೆ ನಿಮ್ಮ ಅರ್ಜಿಯ ಬಗ್ಗೆ ಮಾಹಿತಿ ಸಿಗುತ್ತದೆ. ಅದರಲ್ಲಿ ನಿಮ್ಮ ಅರ್ಜಿ ಸ್ವೀಕೃತವಾಗಿದ್ದರೆ ಕಂಪನಿಯಿಂದ ಅರ್ಜಿ ಸ್ವೀಕರಿಸಲಾಗಿದೆ ಎಂದು ತೋರಿಸಿರುತ್ತಾರೆ. ನಿಮ್ಮ ಹೆಸರಿನ ಮುಂದಿನ ಕೊನೆಯ ಕಾಲಂ ನಲ್ಲಿ ಸೆಲೆಕ್ಟ್(Select) ಎಂಬ ಆಯ್ಕೆ ಇದ್ದು, ಅದರ ಮೇಲೆ ಕ್ಲಿಕ್ ಮಾಡಿ ಆಗ ಇನ್ನಷ್ಟು ವಿವರ ತೋರಿಸುತ್ತದೆ.

Pic 6: Click on Select option

Step 6: ಆಗ ಓಪನ್ ಆಗುವ ಪೇಜ್ ನಲ್ಲಿ ವೀವ್ ಡಿಟೇಲ್ಸ್ ( View Details) ಎಂದಿದ್ದು, ಅದರ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಅರ್ಜಿಯ ಬಗ್ಗೆ ಹೆಚ್ಚಿನ ಸಂಪೂರ್ಣ ಮಾಹಿತಿ ಸಿಗುತ್ತದೆ.

Pic 7: Click on view details

Step 7: ಅದರಲ್ಲಿ ಯಾವ ಸರ್ವೆ ನಂಬರ್ ಗೆ ವಿಮೆ ಕಟ್ಟಿದ್ದೀರಿ, ಯಾವ ಬೆಳೆ ಎಷ್ಟು ವಿಮೆ ಕಟ್ಟಿದ್ದೀರಿ ಎಂಬೆಲ್ಲಾ ಮಾಹಿತಿ ತೋರಿಸುತ್ತದೆ.

Pic 8: Owner details

ಹೀಗೆ ನೀವು ನಿಮ್ಮ ಬೆಳೆ ಹಾನಿ ಪರಿಹಾರ(crop insurance) ಅರ್ಜಿಯ ಸ್ಥಿತಿ ಏನು? ಇನ್ನೂ ಯಾವಾಗ ಪರಿಹಾರ ಸಿಗುತ್ತದೆ ಎಂಬುದನ್ನು ಮೊಬೈಲ್ ನಲ್ಲಿಯೇ ಪರಿಶೀಲಿಸಬಹುದು.

ಬೆಳೆ ಹಾನಿಯಿಂದಾಗಿ ಆಥಿ೯ಕ ನಷ್ಟಕ್ಕೆ ಒಳಗಾಗುವ ರೈತರಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರೈತರು ಬೆಳೆಯುವ ಬೆಳೆಗಳಿಗೆ ವಿಮೆ ಮಾಡಿಸುವ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳ ಮೂಲಕ ಬೆಳೆ ಹಾನಿ ಪರಿಹಾರ ಮೊತ್ತವನ್ನು ರೈತರು ಪಡೆಯುತ್ತಾರೆ.

ವಿಮೆ ಮಾಡಿಸದ ರೈತರು ನಷ್ಟ ಅನುಭವಿಸಿದ್ದರೂ ಕೂಡ ಪರಿಹಾರ ಮೊತ್ತ ಸಿಗಲ್ಲ. ಆದ್ದರಿಂದ ರೈತರು ಸಕಾ೯ರದ ಯೋಜನೆಗಳ ಲಾಭ ಪಡೆದುಕೊಳ್ಳಬೇಕು. ವಿಮೆ ಮಾಡಿಸಿದರೆ ಬೆಳೆ ಹಾನಿಯಾದಾಗ ಪರಿಹಾರ ಮೊತ್ತ ಸಿಗುತ್ತದೆ. ರೈತರಿಗೆ ಈ ಬಗ್ಗೆ ಹೆಚ್ಚಿನ ತಿಳುವಳಿಕೆ ನೀಡುವುದು ಅವಶ್ಯಕವಾಗಿದೆ.

#ಬೆಳೆ ಹಾನಿ#ಹಣ

ಧನ್ಯವಾದಗಳು

< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >

1) ಫೇಸ್ಬುಕ್ / Facebook – ಜೈನ್ ಆಗಿ/ join facebook

2)ವಾಟ್ಸಾಪ್ ಗ್ರೂಪ್ /Whatsapp ಗುಂಪು ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ

3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V.K

ಪರಿಸರ ಪರಿಸರದೊಂದಿಗೆ ಆರ್ಥಿಕತೆ


"Agriculture is our CULTURE"